The Bangalore Urban, Rural & Ramanagara District Co-Operative Milk Producers Socities Union Ltd., (BAMUL) was established during 1975 under Operation Flood II by keeping “AMUL” as its Roll Model. At present Bamul has Bangalore Urban, Bangalore Rural & Ramanagaram Districts of Karnataka State as its area of operation for Milk Procurement and selling milk in part of Bruhath Bangalore Mahanagara Palika (BBMP) area. Since its inception the Union is constantly striving further for dairy development and marketing activities in its milk shed area.
The Bangalore Milk Union Ltd., (BAMUL) is a unit of Karnataka Cooperative Milk Producers Federation Limited (KMF) which is the Apex Body in Karnataka representing Dairy Farmers Co-operatives. It is the second largest dairy co-operative amongst the dairy cooperatives in the country. In South India it stands first in terms of procurement as well as sales. The Brand “nandini” is the household name for Pure and Fresh milk and milk products.
ಶ್ರೀ ಎಂ.ವಿ. ಕೃಷ್ಣಪ್ಪ
ಕರ್ನಾಟಕದ ಹೈನುಗಾರಿಕೆ ಪಿತಾಮಹ ಶ್ರೀ ಎಂ.ವಿ. ಕೃಷ್ಣಪ್ಪ ನವರು ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಮುತ್ತಗದ ಹಳ್ಳಿಯ ಶ್ರೀ ವೆಂಕಟರಾಮೇಗೌಡರವರು ಮತ್ತು ಶ್ರೀಮತಿ ಚಂಗಮ್ಮ ನವರ 3 ನೇ ಮಗನಾಗಿ ದಿನಾಂಕ 1 – 6 – 1918 ರಂದು ಜನಿಸಿದರು. ಶ್ರೀಯುತರು ಬಾಲ್ಯದಲ್ಲಿಯೆ ಬೇಸಾಯ ಹಾಗು ಹೈನುಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. B.A ಪದವೀಧರರಾದ ಇವರು 1952 ರಲ್ಲಿ ಭಾರತದ ಪ್ರಪ್ರಥಮ ಚುನಾವಣೆ ಯಲ್ಲಿ ಕೋಲಾರ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡು ಆಹಾರ ಮತ್ತು ಕೃಷಿ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಂತರ 1957 ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀ ಎಂ.ವಿ. ಕೃಷ್ಣಪ್ಪ ನವರು ತುಮಕೂರು ಲೋಕಸಭೆಯಿಂದ ಸ್ಪರ್ಧಿಸಿ ಗೆದ್ದರು. ನಂತರ 1962 ರಲ್ಲಿ ಕರ್ನಾಟಕ ರಾಜ್ಯ (ಮೈಸೂರು ರಾಜ್ಯ) ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ಸಚಿವರಾದರು. ರೆವೆನ್ಯೂ ಹಾಗು ಪಶುಸಂಗೋಪನಾ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿರುತ್ತಾರೆ.
ಶ್ರೀಯುತರು ಪಶುಸಂಗೋಪನ ಸಚಿವರಾಗಿ 1965 ರಲ್ಲಿ ರಾಜ್ಯದಲ್ಲಿ ಬೆಂಗಳೂರು ಡೈರಿಯನ್ನು ಸ್ಥಾಪನೆ ಮಾಡಲು ತುಂಬಾ ಶ್ರಮವಹಿಸಿದರು.
ಡೆನ್ಮಾರ್ಕ್ ದೇಶದಿಂದ ವಿದೇಶಿ ತಳಿ ಎಚ್.ಎಫ್ ಹಸುಗಳನ್ನು ಭಾರತಕ್ಕೆ ಪರಿಚಯಿಸಿ, ಮಿಶ್ರತಳಿ ಕರುಗಳನ್ನು ರಾಜ್ಯಕ್ಕೆ ತಂದುಕೊಟ್ಟರು. ಇದು ಇಂದು ದೇಶದ ಲಕ್ಷಾಂತರ ರೈತರಿಗೆ ಜೀವನಾಸರೆಯಾಗಿದೆ. ಹಾಗು ಹಾಲಿನಿಂದ ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಯುವಂತಾಗಿದೆ.